ಎಲ್ಯೂಟ್ರಿಯೇಷನ್

ನೀರನ್ನು ಉಪಯೋಗಿಸಿ ಒಂದು ಗೊತ್ತಾದ ಪ್ರಮಾಣದ ಪದಾರ್ಥವನ್ನು ಸಂಪೂರ್ಣವಾಗಿ ವಿಂಗಡಿಸುವ ಕ್ರಮಕ್ಕೆ ಸಾಮಾನ್ಯವಾಗಿ ಇರುವ ಹೆಸರು. ಇದರಿಂದ ಆ ಪದಾರ್ಥದ ವಿವಿಧ ಕಣಗಳ ಗಾತ್ರಗಳನ್ನು, ಮುಖ್ಯವಾಗಿ ಅತಿ ಸಣ್ಣ ಜರಡಿಗಿಂತ ಚಿಕ್ಕದಾದ ಕಣಗಳ ಗಾತ್ರಗಳನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಆಂಡ್ರ್ಯೂಸ್ ಕೈನೆಟಿಕ್ ಎಲ್ಯೂಟ್ರಿಯೇಷನ್, ಶುಷ್ಕ ಎಲ್ಯೂಟ್ರಿಯೇಷನ್ ಮತ್ತು ರೋಲರ್ ಕಣಗಾತ್ರ ವಿಭಾಜಕ (ರೋಲರ್ ಪಾರ್ಟಿಕಲ್ ಸೈeóï ಅನಲೈಸóರ್)-ಇವು ಇದರಲ್ಲಿ ಕೆಲವು ವಿಧಾನಗಳು. ಅದಿರುಗಳನ್ನು ಸಾಂದ್ರೀಕರಿಸುವುದರಲ್ಲಿ ಇವು ಬಹು ಮುಖ್ಯವಾದ ಮಾರ್ಗಗಳು.			      
(ಎಂ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ